Skip to content

Instantly share code, notes, and snippets.

@SathvikPN
SathvikPN / my-kannada-chandassu.txt
Created November 2, 2025 14:05
My Kannada Chandassu
ಸನ್ಮತಿಯ ಸುಸಂಸ್ಕೃತಿ ------------
[ಈ ರಚನೆ ಲಲಿತ ರಗಳೆ ಛಂದಸ್ಸಿನಲ್ಲಿದೆ]
ಮಾನವತೆಯೌಚಿತ್ಯದ ಕಸುವೇ ಸುಸಂಸ್ಕೃತಿ
ಸoಪನ್ನಗೊಳಿಸುವುದು ಅಂತರಾಳ ಸನ್ಮತಿ
ಸುಸಂಸ್ಕೃತಿ ಮಾಡಿಹುದು ಮನುಜನನ್ನು ವಿಶಿಷ್ಟ
ಇತರ ಮೃಗಗಳಿಗಿಂತಲು ಸನ್ನುತ ಸರ್ವೇಷ್ಟ
ಅಂತ್ಯಾದಿಗಳಿಗೆ ಸಾಕ್ಷಿಯಾಗುವ ಸೃಷ್ಟಿಯಲಿ
ಎಂದೆoದಿಗೂ ಬತ್ತದೆ ಆರ್ಕದಿ ಸುಸಂಸ್ಕೃತಿ